Posts

Showing posts from February, 2011

Kunthi and her illegitimate son Karna .....the sea... and the unknown...!! A story of Kunthi from Tribal Mahabharatha

Image
ಕುಂತಿ ಮುಟ್ಟಾಗಿ  ಒಂದೇ  ದಿನವಾಗಿತ್ತು. ಕುಂತಿಯ ಅಪ್ಪ ಮುಳ್ಳು ಬೇಲಿಯ ಕದ ತೆಗೆದು ಹಿತ್ತಲಿಗೆ  ನಡೆಯುತ್ತಾನೆ. ತೂಗುವ  ಹೀರೆಕಾಯಿ  ,ಬಾಗುವ ಬದನೆ ಕಾಯಿ ಕೊಯ್ಯುತ್ತಾನೆ. ತುಡುಪದಲ್ಲಿ  ಮಡಗುತ್ತಾನೆ .ಹಿತ್ತಲಿನಿದ ತಿರುಗಿ ಬರುತ್ತಾನೆ.  ಮುಳ್ಳು ಬೇಲಿಯ ಕದವನ್ನು ಜಡಿಯುತ್ತಾನ
ಕುಂತಿಯ ಅಪ್ಪ. ಬಟ್ಟರ ಮನೆಯ ದಾರಿ ಹಿಡಿಯುತ್ತಾನೆ. ಭಟ್ಟರ ಮನೆಯ ಅಂಗಳದಲ್ಲಿ ನಿಲ್ಲುತ್ತಾನೆ.  .ಭಟ್ಟರು" ಯಾವಾಗಲು ಬರದವನು ಇಂದ್ಯಾಕೆ ಬ೦ದಿಯೋ .ಬಂದ ಕಾರಣ ಹೇಳು"  ಅನ್ನುತ್ತಾರೆ . ಕುಂತಿಯ ಅಪ್ಪ -"ಮಗಳು ಮೀಯುವ  ದಿನ ನೋಡು "ಎನ್ನುತ್ತಾನೆ .ಭಟ್ಟರು ಪುಸ್ತಕ ತೆರೆದು ನೋಡುತ್ತಾರ." ಕುಂತಿಯ ಅಪ್ಪನೇ ಕೇಳು- ಹಿತ್ತಲಲ್ಲಿಯೇ ಬಾವಿ ಕಡೆಯಬೇಕು.... ಕುಂತಿ ಅಲ್ಲಿಯೇ ಮೀಯಬೇಕು:" ಎಂದು ಹೇಳುತ್ತಾರೆ. .ಭಟ್ಟರ ಆ  ಮಾತು ಕೇಳಿಕೊಂಡು  ಕುಂತಿಯ ಅಪ್ಪ  ಮನೆಗೆ ಬರುತ್ತಾನೆ.
ಕುಂತಿಯ ಅಪ್ಪ ಊರ ಮಕ್ಕಳಿಗೆ ಬರಲು ಹೇಳುತ್ತಾನೆ. ಊರ ಮಕ್ಕಳ ಕ್ಯೆಯಲ್ಲಿ ಗುದ್ದಲಿ ಕೊಡುತ್ತಾನೆ  ,ಊರ ಮಕ್ಕಳು ಹಿತ್ತಲಲ್ಲಿ ಬಾವಿ ಕಡೆಯುತ್ತಾರೆ . ಬಾವಿಯಲ್ಲಿ ಒಂದೇ ದಿನಕ್ಕೆ ನೀರು ಬರುತ್ತದೆ. ಕುಂತಿಯ ಅಪ್ಪ ಕುಂತಿಯನ್ನು ಕರೆದು ಹೇಳುತ್ತಾನೆ "ಕುಂತಿ ಕೇಳೆ... ಹಿತ್ತಲಲ್ಲೇ ಬಾವಿ ಕಡೆದಿದ್ದೇನೆ...  ಅಲ್ಲೇ ಸ್ನಾನಮಾಡು .. ಸಮುದ್ರಕ್ಕೆ ಹೋಗಬೇಡ " ಎನ್ನುತ್ತಾನೆ  ಅದಕ್ಕೆ ಕುಂತಿ ಹೇಳುತ್ತಾಳೆ. "ಕೇರೆ ಹಾವಿನಂತೆ ನಾನು ಹೊಂಡ…